Preaload Image

Management Desk

Sri K S Vijay Anand, Honorable President

Trust Message

The Transition from ignorance to knowledge is the essential need of human mind. It is in the direction that letters and information should work on along with my best mines I hope the web will become a channel of information to our students and Users.

Sri K R Dayanand, Joint Secretary

Principal Desk

Principal Message

The Pre-University College situated in an ambience of greenery has been accredited ‘A’ Grade by the pre-university education department. The College provides excellent infrastructure for academic, cultural and sporting activities. Although merit is given prominence the institution also consider the rural and  the needy students. The focus is to provide proper guidance to both curriculum and other activities. The aim is to empower our students academically as well as culturally.

The teaching faculty assisted by the non-teaching staff strive hard to enlighten the students towards social, ethical and humanitarain values.

The Management’s aim is to achieve quality. In this regard well equipped Laboratory and an updated library is facilitated for all the departments. An excellent sports complex is provided on the campus. The institution also provides students NSS and NCC avenues to excel in patriotic dutie.

ನಮ್ಮ ಪಿ.ಇ.ಎಸ್ ಪದವಿ ಪೂರ್ವ ಕಾಲೇಜು ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಪರಿಶೀಲನೆಗೆ ಒಳಪಟ್ಟು “ಎ“ ಗ್ರೇಡ್ ಮಾನ್ಯತೆ ಪಡೆದಿದೆ. ನಮ್ಮ ಕಾಲೇಜು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಾದ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಒಂದು ಸುಂದರ ಕಟ್ಟಡವನ್ನು ಹೊಂದಿದೆ, ಕೇವಲ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡದೆ, ಉನ್ನತ ಶಿಕ್ಷಣ ಪಡೆಯಲು ಕನಸನ್ನು ಕಾಣುವ, ಕಡಿಮೆ ಅಂಕಗಳಿಸಿರುವ ಸಾವಿರಾರು ಗ್ರಾಮೀಣ ವಿದ್ಯಾರ್ಥಿಗಳಿಗೂ ಪ್ರವೇಶ ಕಲ್ಪಸಿಕೊಟ್ಟಿದೆ. ಅವರಿಗೆ ಪಠ್ಯ ಮತ್ತು ಪಠ್ಯೇತರ ವಿಷಯಗಳ ಬಗ್ಗೆ ಸೂಕ್ತ ಮಾರ್ಗರ್ದಶನ ನೀಡಿ ಅವರನ್ನು ಆಧುನಿಕ ಸ್ಫರ್ಧಾತ್ಮಕ ಸಮಾಜದಲ್ಲಿ ಸಮರ್ಥ ರೀತಿಯಲ್ಲಿ ಪೈಪೋಟಿ ನಡೆಸಲು ಶಕ್ತರನ್ನಾಗಿಸುವ ಗುರಿ ಹೊಂದಿದೆ.

ನಮ್ಮ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಮತ್ತು ಆಡಳಿತ ಮಂಡಳಿಯಿಂದ ನೇಮಕ ಹೊಂದಿರುವ ಅನುದಾನಿತ, ಅಪಾರ ಬೋಧನಾ ಅನುಭವವಿರುವ ಹಾಗೂ ವಿದ್ಯಾರ್ಥಿಗಳ ಬಗ್ಗೆ ಸಾಮಾಜಿಕ ಕಳಕಳಿಯುಳ್ಳ ಬೋಧಕ ವರ್ಗವಿದೆ. ವಿದ್ಯಾರ್ಥಿಗಳಲ್ಲಿ ಜ್ಞಾನಾರ್ಜನೆಯ ಜೊತೆಗೆ ಅವರಲ್ಲಿ ನೈತಿಕತೆ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಅರಿವನ್ನು ಮೂಡಿಸುವ ಅಧ್ಯಾಪಕ ಮತ್ತು ಅಧ್ಯಾಪಕೇತರ ವರ್ಗವಿದೆ. ಜೊತೆಗೆ ನಮ್ಮ ಎಲ್ಲಾ ಧ್ಯೇಯೋದ್ದೇಶಗಳನ್ನು ಸಾಧಿಸಲು ಒತ್ತಾಸೆಯಾಗಿ ನಮ್ಮ ಸಂಸ್ಥೆಯ ವರಿಷ್ಠರ ಪ್ರೋತ್ಸಹ ಹಾಗೂ ಬೆಂಬಲವಿದೆ.

ನಮ್ಮ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಆಧುನಿಕ ಉಪಕರಣಗಳನ್ನು ಒಳಗೊಂಡ ಸುಸಜ್ಜಿತ ಪ್ರಯೋಗಾಲಯವಿದ್ದು, ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರಹೊಮ್ಮಿಸಲು ವಾರ್ಷಿಕ ಸಂಚಿಕೆ “ಜ್ಞಾನದೀಪ” ವನ್ನು ಪ್ರಕಟಿಸಲಾಗುತ್ತಿದೆ. ಹಾಗೂ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾಸಕ್ತ ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿಯೇ ಅತ್ಯುತ್ತಮವಾದ ಕ್ರೀಡಾ ಸಮುಚ್ಛಯವನ್ನು ನಿರ್ಮಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮ, ರಾಷ್ಟ್ರ ರಕ್ಷಣೆ, ಮತ್ತು ಶಿಸ್ತು, ಇವುಗಳ ಬಗ್ಗೆ ಅರಿವು ಮೂಡಿಸಲು ಅತ್ಯುತ್ತಮವಾದ ಎನ್.ಎಸ್.ಎಸ್ ಹಾಗೂ ಎನ್.ಸಿ.ಸಿ ಘಟಕವಿದೆ.
Mr. SannaMoga K